ಬಿಗ್ ಬಾಸ್ ಕನ್ನಡ ಸೀಸನ್ 5 : ದಿವಾಕರ್ ಹಾಗು ಶ್ರುತಿ ಪ್ರಕಾಶ್ ಇಬ್ಬರಿಗೂ ಶಿಕ್ಷೆ | Filmibeat Kannada

2017-10-28 1,118

Bigg Boss Kannada 5: Bigg Boss Punished Diwakar and Captain Shruti Prakash. Divakar Rejects 'Worst performer' tag from Captain Shruthi.Diwakar annoyed with Shruthi Prakash. Now both got nominated directly.

'ಕಳಪೆ' ಜಗಳ: ಶ್ರುತಿ-ದಿವಾಕರ್ ಇಬ್ಬರಿಗೂ ಸಂಕಷ್ಟ ತಂದಿಟ್ಟ ಬಿಗ್ ಬಾಸ್ ಶಿಕ್ಷೆ.! ಬಿಗ್ ಬಾಸ್ ನಿಯಮವನ್ನ ಉಲ್ಲಂಘಿಸಿದ ಕಾರಣಕ್ಕೆ ಮನೆಯ ಕ್ಯಾಪ್ಟನ್ ಶ್ರುತಿ ಪ್ರಕಾಶ್ ಮತ್ತು ಸ್ಪರ್ಧಿ ದಿವಾಕರ್ ಗೆ ಬಿಗ್ ಬಾಸ್ ಶಿಕ್ಷೆ ನೀಡಿದ್ದು, ಇದು ಈ ಇಬ್ಬರಿಗೂ ಅಪಾಯ ತಂದಿದೆ. ಈ ವಾರ ದಿವಾಕರ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಕ್ಯಾಪ್ಟನ್ ಶ್ರುತಿ, ದಿವಾಕರ್ ಗೆ 'ಕಳಪೆ' ಬೋರ್ಡ್ ನೀಡಿದರು. ಆದ್ರೆ, ಕ್ಯಾಪ್ಟನ್ ನೀಡಿದ ಬೋರ್ಡ್ ನ್ನ ದಿವಾಕರ್ ತಿರಸ್ಕರಿಸಿದ್ದು, ಬೋರ್ಡ್ ಹಾಕಿಕೊಳ್ಳದೆ ಬಿಗ್ ಬಾಸ್ ನಿಮಯ ಉಲ್ಲಂಘಿಸಿದರು. ಅದಕ್ಕಾಗಿ ಕ್ಯಾಪ್ಟನ್ ಮತ್ತು ಸ್ಪರ್ಧಿ ಇಬ್ಬರನ್ನ ಶಿಕ್ಷಿಸಲಾಗಿದ್ದು, ಇವರಿಬ್ಬರ ಹಾದಿಗೂ ಈ ಶಿಕ್ಷೆ ಅಪಾಯವಾಗಿದೆ. ಅಷ್ಟಕ್ಕೂ, ಬಿಗ್ ಬಾಸ್ ಕೊಟ್ಟ ಶಿಕ್ಷೆ ಏನು? ದಿವಾಕರ್ ಅವರು ಕ್ಯಾಪ್ಟನ್ ನೀಡಿದ ಕಳಪೆ ಬೋರ್ಡ್ ಹಾಕಿಕೊಳ್ಳುವಂತೆ ಮನೆಯ ಕ್ಯಾಪ್ಟನ್ ಶ್ರುತಿ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಶಿಕ್ಷೆ ನೀಡಲಾಗುವುದು ಎಂದು ಸೂಚನೆ ಕೊಟ್ಟಿದ್ದರು.

Videos similaires